Monday, March 22, 2010

ನಮ್ಮ ಶಾಲೆ



ಸುಂದರವಾದ ಗಿಡ ಮರ ಹಸಿರಿನ

ನಡುವೆ ನಮ್ಮಯ ಕಲಿಕೆಯ ಶಾಲೆಯಿದೆ

ಎದುರಿಗೆ ಆಟದ ವಿಶಾಲ ಬಯಲು

ಆಡಲು ನಮ್ಮನ್ನು ಕರೆಯುತ್ತದೆ.

ಎದ ಬಲಗಳಲ್ಲಿ ಹೂ ತರಕಾರಿ

ಮಡಿಗಳು ಕಂಪನ್ನು ಸೂಸುತ ನಿಂತಿಹವು

ತೆಂಗು ,ಮಾವು ಹಲವು ತೇಗ

ಮುಗಿಲ ನೋಡಿ ನಗುತಲಿದೆ.

ಪಾಠದ ನಂತರ ತುಸು ವಿಶ್ರಾತಿಯ

ಸಂಜೆಯ ಸಮಯದಿ ಆಟೋಟ

ಶಿಸ್ತು ,ಸಂಯಮ, ಆಟ ಪಾಠದ

ರಸದೌತಣ ನೀಡುತ್ತಿರುವ ಶಾರದ ಮಂದಿರ

ಕನ್ನಡ ಮಾತೆಯ ಮಡಿಲಲ್ಲಿ

ಹೇಮಾವತಿ ನದಿಯ ತೀರದಲ್ಲಿ

ಹಸಿರನ್ನೂಂದಿರುವ ಭೂಮಾತೆಯ

ಮಡಿಲಲ್ಲಿ ನಲೆಸಿರುವ ಶಾರದ ಮಂದಿರ ಶಾಲೆ

ಹುಡುಕಾಟ


ಶಾಲೆ ಎಂಬುದು ರಸದೂಟ

ಇಲ್ಲಿ ಎಡವಿದರೆ ವಿಷದೂಟ

ಇಲ್ಲಿ ವಿದ್ಯೆಗು ಬುದ್ದಿಗೂ ಹೋರಾಟ

ಇದು ನಡತೆ, ಗುಣ ಪರೀಕ್ಷೆ ಕೂಟ


ಶೋಕಭರಿತ ಶೋಕಿಲಾಲರ ಕೂಟ

ತರಗತಿಯಲ್ಲಿ ಶಿಕ್ಷಕರ ಬುದ್ದಿಯೂಟ

ಬಿಡುವಿದ್ದರೆ ಸ್ನೇಹಿತರ ಕೂಟ

ಇವುಗಳ ಮಧ್ಯೆ ಓದುವ ಮಂಗನಾಟ


ಓದಲು ಕುಳಿತರೆ ವಿವಿಧ ಪಾಠದ ಪರದಾಟ

ಜ್ಞಾಪಿಸಿಕೊಂಡರೆ ಮೆದುಳಿನ ನಾಗಾಲೋಟ

ನಂತರೆ ಅಮ್ಮನ ಅಡುಗೆ ಮನೆ ಕಡೆ ಓಟ

ಕೊನೆಗೆ ಆಯಾಸವಾಗಿ ನಿದ್ದೆಯೊಂದಿಗೆ ಸುಖದಾಟ


ತರಗತಿಯ ಆದಿ ಅಂತ್ಯದಲ್ಲಿ ವಿಧ ವಿಧ ಚಟ

ಶನಿದೃಷ್ಟಿ ಬಿದ್ದಂತೆ ಕಿರು ಪರೀಕ್ಷೆಗಳ ಕಾಟ

ನಪಾಸದರೆ ಮನೆಯವರ ಬೈಗುಳದೂಟ

ಪಾಸಾದರಂತೂ ನೌಕರಿಯ ಹಿಡುಕಾಟ.


Thursday, March 18, 2010

ಹೆಣ್ಣು ಸಂಸಾರದ ಕಣ್ಣು



ಎಲ್ಲಿ ಸ್ತ್ರೀಯರಿಗೆ ಪೂಜ್ಯತೆ ಇದೆಯೋ ಅಲ್ಲಿ ದೇವತೆಗಳು ಸಂತುಷ್ಠರಾಗುತ್ತಾರೆ. ಹೆಣ್ಣು ಸಮಾಜದ ಕಣ್ಣು. ಹೆಣ್ಣು ತ್ಯಾಗದ ವುತೀಕ ಹೆಣ್ಣು ಗಂಡನ ಜೊತೆ ತ್ಯಾಗಕ್ಕಾಗಿ ಹೋರಾಡುವುದೇ ಅವಳ ಗುರಿ &ಅವಳು ಅದರಲ್ಲಿ ಗೆದ್ದು ಮುಂದೆ ಬಂದರೆ ಅವಳಿಗೆ ಸಂತೋಷವಾಗುತ್ತದೆ. ಅದೇ ಹೆಣ್ಣು ತ್ಯಾಗ ಮಾಡುವುದೇ ನನ್ನ ಗುರಿಯಾಗಬೇಕು ಎಂದು ಹೋರಾಡಿದರೆ. ಅದೇ ಗಂಡುತ್ಯಾಗ ಮಾಡುವುದೇ ತಾನ್ನೂಬ್ಬನ ಸುಖಕ್ಕೆ ಮಾತ್ರ ಎಂದು ಹೋರಾಡುತ್ತಾನೆ. ಇಷ್ಷು ಉನ್ನತ ಸ್ಥಾನವನ್ನು ಹೊಂದಿದ ಹೆಣ್ಣು ಸುಭದ್ರವಾದ ರಾಷ್ಷ್ರಕಟ್ಟಲು ಮೂಲಶಿಲ್ಲಿ ಯಾಗಿದ್ದಾಳೆ. ಹೆಣ್ಣು ಹಲವಾರು ರೂಪವನ್ನು ತಾಳುತ್ತಾಳೆ.ತಾಯಿಯಾಗಿ. ಮಗಳಾಗಿ.ಸೊಸೆಯಾಗಿ.ಹೀಗೆ ಹಲವಾರು ಮಗುವಿಗೆ ಮನೆಯಲ್ಲಿ ಮೂದಲ ಪಾಠ ಶಾಲೆ ಅದರಲ್ಲಿ ಮುಖ್ಯಪಾತ್ರವೇ ತಾಯಿಯ ಆಸೆಯೇ ದು:ಖಕ್ಕೆ ಮೂಲ ಎಂದು ಮಾನಕಾಲಕ್ಕೆ ಸಾರಿ ಹೇಳಿದ್ದು ಗೌತಮಬುದ್ದನಲ್ಲ ಅವನನ್ನ ಹೆತ್ತವಳು. ತಾಯಿಯಲ್ಲಿವೇ ಹಿಂದೂ ಧಮ ಉಳಿವಿಗಾಗಿ ಹೋರಾಡಿದವರೇ ಛತ್ರಪತಿ ಶಿವಾಜಿಯಲ್ಲಿವೆ? ಅವರನ್ನು ಹೆತ್ತವಳು ತಾಯಿಯಲ್ಲಿವೇ? ಹಾಗೆಯೇ ನಮ್ಮದೇಶಕ್ಕಾಗಿ ಹೋರಾಡಿ ನಮಗೆ ಸ್ವತಂತ್ರ ತಂದು ಕೂಡಲು ಕಾರಣರಾದವರು ಅವರನ್ನು ಹೆತ್ತವರು ತಾಯಿಯಲ್ಲಿವೇ?ಅದೇ ರೀತಿ ಮಕ್ಕಳು 6ಗಂಟೆ ಶಾಲೆಯಲ್ಲಿ ಪಾಠ ಕಲಿತು ಉಳಿದ18 ಗಂಟೆಗಳ ಕಾಲ ತಾಯಿಯ ನೆರಳಿನಲ್ಲಿಯೇ?ವ್ಯಯಮಾಡುತ್ತಾರೆ. ನಮ್ಮ ಮಕ್ಕಳು ಒಳ್ಳೆಯ ನಾಗರೀಕರಾಗಿ ಬಾಳಿಲಿ ಎಂದು ಆಶಿಸುತ್ತಾರೆ. ಹಾರೇಸುತ್ತಾರೆ. ಇಂತಹ ಮಾತೆಗೆ ನನ್ನ ಹೃದಯಪೂವಕ ವಂದನೆಗಳು.