Monday, March 22, 2010

ಹುಡುಕಾಟ


ಶಾಲೆ ಎಂಬುದು ರಸದೂಟ

ಇಲ್ಲಿ ಎಡವಿದರೆ ವಿಷದೂಟ

ಇಲ್ಲಿ ವಿದ್ಯೆಗು ಬುದ್ದಿಗೂ ಹೋರಾಟ

ಇದು ನಡತೆ, ಗುಣ ಪರೀಕ್ಷೆ ಕೂಟ


ಶೋಕಭರಿತ ಶೋಕಿಲಾಲರ ಕೂಟ

ತರಗತಿಯಲ್ಲಿ ಶಿಕ್ಷಕರ ಬುದ್ದಿಯೂಟ

ಬಿಡುವಿದ್ದರೆ ಸ್ನೇಹಿತರ ಕೂಟ

ಇವುಗಳ ಮಧ್ಯೆ ಓದುವ ಮಂಗನಾಟ


ಓದಲು ಕುಳಿತರೆ ವಿವಿಧ ಪಾಠದ ಪರದಾಟ

ಜ್ಞಾಪಿಸಿಕೊಂಡರೆ ಮೆದುಳಿನ ನಾಗಾಲೋಟ

ನಂತರೆ ಅಮ್ಮನ ಅಡುಗೆ ಮನೆ ಕಡೆ ಓಟ

ಕೊನೆಗೆ ಆಯಾಸವಾಗಿ ನಿದ್ದೆಯೊಂದಿಗೆ ಸುಖದಾಟ


ತರಗತಿಯ ಆದಿ ಅಂತ್ಯದಲ್ಲಿ ವಿಧ ವಿಧ ಚಟ

ಶನಿದೃಷ್ಟಿ ಬಿದ್ದಂತೆ ಕಿರು ಪರೀಕ್ಷೆಗಳ ಕಾಟ

ನಪಾಸದರೆ ಮನೆಯವರ ಬೈಗುಳದೂಟ

ಪಾಸಾದರಂತೂ ನೌಕರಿಯ ಹಿಡುಕಾಟ.


No comments:

Post a Comment